Thursday, November 24, 2011

ಹೆಸರು - Name

ಹೆಸರಲ್ಲೇನಿದೆ ಮಹಾ?
ಹಾಗಾದರೆ, ನಿಮ್ಮ ಹೆಸರನ್ನ ಅಲ್ಪ ಬದಲಾವಣೆ ಮಾಡಿ ಇನ್ನೊಬ್ಬ ಕೂಗಿದಾಗ ನಿಮಗೆ ಹೇಗನಿಸುತ್ತೆ?

ಎಲ್ಲರೂ ಅವರವರ ಹೆಸರನ್ನ ಸರಿಯಾದ ರೀತಿಯಲ್ಲಿ ಕೇಳಿಸಿಕೊಳ್ಳಲು ಇಷ್ಟಪಡುವರೇ ಹೊರತು ಅದರ ಅಲ್ಪ ಬದಲಾವಣೆ/ಅವಹೇಳನ ವನ್ನ ಯಾರೂ ಸಹಿಸಲಾರರು. ಮಾತನಾಡುವಾಗ/ಬರೆಯುವಾಗ ಹೆಸರನ್ನು ಸಾಧ್ಯವಾದಷ್ಟು ಪುನ: ಪುನ: ಉಪಯೋಗಿಸುವುದು ನೀವೊಬ್ಬ ಪ್ರಭಾವೀ ಸಂಪರ್ಕ ವ್ಯಕ್ತಿಯಾಗಲು ಸಹಾಯವಾಗುವ ಮೈಲುಗಲ್ಲು.

"Everybody wants to be recognized" - "ಪ್ರತಿಯೊಬ್ಬನೂ ತಾನೊಬ್ಬ ವ್ಯಕ್ತಿಯೆಂದೆನಿಸಿಗೊಳ್ಳಲು ಬಯಸುತ್ತಾನೆ"

ಅವನ ಸರಿಯಾದ ಹೆಸರನ್ನು ಉಪಯೋಗಿಸಿದಾಗ, ಅವನನ್ನು ನೀವು ಒಬ್ಬ ಒಳ್ಳೆಯ ವ್ಯಕ್ತಿಯೆಂದು ಗುರುತಿಸಿದ್ದೀರಿ ಎನ್ನುವ ಭಾವನೆ ಅವನೊಳಗೆ ಹುದುಗಿರುವ ಅಹಂ ಗೆ ತಟ್ಟುತ್ತದೆ. ಹೆಸರೆನ್ನುವುದು ಅವನ ಬಾಲ್ಯದಿಂದಲೇ ಸಂಭೋದಿಸಲ್ಪಡುತ್ತಿರುವುದರಿಂದ, ಅದರಲ್ಲಿ ವ್ಯತ್ಯಾಸ ಕಂಡಾಗ, ಅವನೊಳಗೆ ಏನೋ ನನ್ನನ್ನು ಇವರು ಅವಮಾನಿಸುತ್ತಿದ್ದಾರೆ ಎನ್ನುವ ಭಾವನೆ ಒಳತಳ್ಳಲ್ಪಟ್ಟು, ನಿಮ್ಮನ್ನು ಅಲ್ಲೇ ತಿರಸ್ಕರಿಸಲು ದಾರಿಯಾಗುತ್ತದೆ.

ಉಚ್ಛರಿಸುವಾಗ(ಅಥವಾ ಕಾಗದ ಬರೆಯುವಾಗ) ಹೆಸರಿನ ಸಂಬೋಧನೆಯಲ್ಲಿ ಆದ ಸಣ್ಣ ಪ್ರಮಾದದಿಂದ ಎಷ್ಟೊ ಜನರು ತಮ್ಮ ಕೆಲಸಗಳನ್ನು ಕಳೆದುಕೊಂಡದ್ದೊ, ಮತ್ತಿನ್ನಿತರೇ ಕಳಕ್ಕೊಂಡ ಉದಾಹರಣೆಗಳು ಜಗತ್ತಿನಲ್ಲಿ ತುಂಬಾ ಕಾಣಸಿಗುತ್ತದೆ (ಕೇಳಬಹುದು).

Tuesday, November 22, 2011

ಮೂರನೇ ವ್ಯಕ್ತಿಗೆ ಸಂಪರ್ಕ ಸಾಧಿಸಬೇಕಾದಾಗ ಪ್ರಾಮುಖ್ಯ ವಿಚಾರಗಳು - Points to be noted in third party communication

ಅತ್ಯಂತ ಪ್ರಾಮುಖ್ಯ ವಿಚಾರಗಳು:-

1. ಯಾರಿಗಾದರು ಬೇರೆಯವರ ಮೂಲಕ ವಿಷಯ ತಿಳಿಸಬೇಕಿದ್ದರೆ,
ಆತನ ವಯಸ್ಸು, ಬುದ್ದಿ ಶಕ್ತಿ, ಅನುಭವ - ಆತನ ಕೇಳಿಸಿಕೊಳ್ಳುವಿಕೆ ಶಕ್ತಿ, ವಿಷಯದ ಮಹತ್ವ - ಇವುಗಳ ಬಗ್ಗೆ ನಿಮಗೆ ತಿಳುವಳಿಕೆ ಇರಲಿ.

2. ಆತ ಚಿಕ್ಕವನಾಗಿದ್ದರೆ ಅಥವಾ ಓದು ಬರಹ ಕಡಿಮೆಯಿದ್ದರೆ, ನೀವು ಅವನಿಗೆ ತಿಳಿಸಿದ ವಿಷಯ ಮಗದೊಮ್ಮೆ ಅವನ ಬಾಯಿಂದ ಹೇಳಿಸಿಕೊಳ್ಳಿ.

3. ಯಾರಿಗೆ ವಿಷಯ ತಿಳಿಸಬೇಕೊ ಅವನ ಗ್ರಹಣ ಶಕ್ತಿಯ ಬಗ್ಗೆ ಅರಿವಿರಲಿ.

4. ಬಾಯಲ್ಲಿ ಹೇಳಿ ಕಳಿಸುವುದಕ್ಕಿಂತ ಬರೆದು ಕಳಿಸುವುದು ಉತ್ತಮ.

5. ನೀವು ಬಾಯಲ್ಲಿ ಹೇಳಿ ಕಳಿಸಿದರೂ, ನಿಮಗೆ ಬೇಕಾದ ವಿಷಯ ಮಹತ್ವದ್ದಾದರೆ ಅದನ್ನು ಬರೆಸಿಕೊಂಡು ಬಾ ಅಂತ ಹೇಳಿ.

6. ಯಾರಿಗೆ ವಿಷಯ ತಿಳಿಸಬೇಕೊ ಆತನನ್ನ ಹುಡುಕಿಕೊಂಡು ಹೋಗುವ ವ್ಯಕ್ತಿಗೆ ಸರಿಯಾದ ಮಾಹಿತಿ ನೀಡಿ.

7. ಯಾರಿಗೆ ವಿಷಯ ತಿಳಿಸಬೇಕೊ ಅವರು ಸಿಗದಿದ್ದಾಗ ಮುಂದೇನು ಮಾಡಬೇಕು ಅನ್ನುವುದರ ಬಗ್ಗೆ, ನೀವು ಕಳಿಸುತ್ತಿರುವ ವ್ಯಕ್ತಿಗೆ ಸರಿಯಾದ ಮಾಹಿತಿ ನೀಡಿ.

8. ಯಾರನ್ನು ಸಂಪರ್ಕಿಸಬೇಕೊ ಆ ವ್ಯಕ್ತಿಯ ಮನೆ ಅಥವಾ ಆಫೀಸ್ ಗೆ ನೀವು ಕಳಿಸುವ ನಿಮ್ಮ ಮಿತ್ರ ಯಾ ಅಟೆಂಡರ್ ಈ ಕೆಳಗಿನ ವಿಷಯಗಳನ್ನ ಮರೆಯುತ್ತಾನೆ -
ಅವರ ಮನೆ ಬಾಗಿಲು ಹಾಕಿದೆ - ಆದ್ದರಿಂದ ಅವರಿಲ್ಲ.
ಅವರ ಮನೆ ಮುಂದೆ ಅವರ ಸ್ಕೂಟರ್, ಬೈಕ್, ಕಾರು ಇಲ್ಲ - ಆದ್ದರಿಂದ ಅವರಿಲ್ಲ.
ಅವರ ಮನೆ ದೀಪವಿರಲಿಲ್ಲ - ಆದ್ದರಿಂದ ಅವರಿಲ್ಲ.
ತುಂಬಾ ಹೊತ್ತು ಬೆಲ್ ಮಾಡಿದೆ - ಬಹುಶ: ಅವರು ಊರಲ್ಲಿಲ್ಲ.
ಅವರ ಮನೆ ವಾಚ್ ಮನ್ ನನ್ನ ಕೇಳಿದೆ - ಅವರಿಲ್ಲ ಅಂದ.
ಅವರ ಹೆಂಡತಿಯನ್ನು ಕೇಳಿದೆ - ಇಲ್ಲಾಂತಂದರು.
ಇಂತಹ ಸಂದರ್ಭಗಳಲ್ಲಿ ನಿಮ್ಮ ವಿಷಯ ವಾಹಕ (ಮೆಸೆಂಜರ್) ನಿಗೆ ಸೂಕ್ತ ಸಲಹೆಗಳನ್ನು ಮುಂದಾಗಿ ತಿಳಿಸಿರಿ.
ಅವರ ಬೈಕ್, ಸ್ಕೂಟರ್, ಕಾರು ರಿಪೇರಿಗೆ ಕೊಟ್ಟಿರಬಹುದು/ಇಲ್ಲವೇ ಮನೆಯಲ್ಲಿರುವ ಇನ್ನೊಬ್ಬ ತಗೊಂಡುಹೋಗಿರಬಹುದು.
ಮನೆ ಬಾಗಿಲು ಹಾಕಿದ್ದರೂ ಅವರು ಒಳಗಿರಬಹುದು.
ಅವರ ಮನೆ ದೀಪ ಕೆಟ್ಟು ಹೋಗಿರಬಹುದು.
ವಾಚ್ ಮನ್, ಹೆಂಡತಿ, ಮಕ್ಕಳು ಹೇಳಿದ್ದನ್ನು ಮಾತ್ರ ಕೇಳುವುದಲ್ಲ, ಈ ಕೆಳಗಿನ ವಿಚಾರಗಳು ಬಹು ಮುಖ್ಯ - ಅವರು ಊರಲ್ಲಿದ್ದಾರೆಯೇ?, ಯಾವ ಕಡೆ ಹೋಗಿದ್ದಾರೆ?, ಎಷ್ಟು ಹೊತ್ತಿಗೆ ಬರಬಹುದು, ನಾನು ಇಂತಹವರ ಪರವಾಗಿ ಬಂದಿದ್ದೇನೆ, ಇಂತಹ ವಿಷಯ ತಿಳಿಸಿ, ನಾನು ಪುನ: ಬರುತ್ತೇನೆ ಇಂತಿಂತಹ ವಿಷಯಗಳನ್ನು ಕೇಳಿ ತಿಳಿದುಕೊಂಡಿರಿ.

9. ಯಾರಿಗಾದರೂ ಮೊಬೈಲ್/ಟೆಲೆಫೋನ್ ಮೂಲಕ ವಿಷಯ ತಿಳಿಸಬೇಕಾದಾಗ ಕೆಳಗಿನ ವಿಚಾರ ಗಮನದಲ್ಲಿರಲಿ.
ಫೋನಾಯಿಸಿದಾಗ ನೀವು ಬಯಸಿದ ವ್ಯಕ್ತಿ ಸಿಗದಿದ್ದರೆ ಮೊದಲು ನಿಮ್ಮ ಪರಿಚಯ ಮಾಡಿಕೊಳ್ಳಿ.
ನಂತರ ಮಾತನಾಡುತ್ತಿರುವವರು ಯಾರು ಎಂದು ನಯವಾಗಿ ಕೇಳಿ ತಿಳಿದುಕೊಳ್ಳಿ.
ನೀವು ಯಾರಿಗೆ ವಿಷಯ ತಿಳಿಸಬೇಕಾಗಿದೆಯೊ ಆ ವಿಷಯ ಗೌಪ್ಯವಾದದ್ದು ಅಲ್ಲದಿದ್ದರೆ, ಮತ್ತೀಗ ಫೋನ್ ತಗೊಂಡ ವ್ಯಕ್ತಿ ತಿಳಿಸುವವನಾಗಿದ್ದರೆ, ವಿಷಯ ತಿಳಿಸಿ. ಇಲ್ಲದಿದ್ದರೆ, ನೀವು ಫೋನ್ ಮಾಡಿದ ವಿಷಯ ಹೇಳಿ ಎಂದು ತಿಳಿಸಿ. ನಿಮ್ಮ ಫೋನ್/ಮೊಬೈಲ್ ಸಂಖ್ಯೆ ಯನ್ನ ಕೊಡಲು ಮರೆಯದಿರಿ.

10. ಕೆಲವೊಮ್ಮೆ ನಾವು ಚಿಕ್ಕ ಚಿಕ್ಕ ವಿಷಯಗಳನ್ನು ಅತಿ ಕ್ಲಿಷ್ಟವಾಗಿ ಮಾಡುತ್ತೇವೆ.
ಕಡೆಯದಾಗಿ -
"ಹೇಳುವುದನ್ನು ಕೇಳಿಸಿಕೊಳ್ಳುವವರಿಗೆ ಸರಿಯಾಗಿ ಅರ್ಥವಾಗುವಂತೆ, ಕೇಳಿಸಿಕೊಳ್ಳುವಂತೆ ಹೇಳಿ"

ಕೇಳಿಸಿಕೊಳ್ಳುವ ಕಲೆ ಬೆಳೆಸಲು ಸಹಕಾರಿಯಾಗುವ ಪ್ರಶ್ನಾವಳಿ - Identify your listening skill

ನೀವು ಎಷ್ಟು ಚೆನ್ನಾಗಿ ಕೇಳಿ ಅರ್ಥ ಮಾಡಿಕೊಳ್ಳ ಬಲ್ಲಿರಿ, ಎಂಬುದನ್ನು ಈ ಕೆಳಗಿನ ಪ್ರಶ್ನಾವಳಿಯಿಂದ ಪರೀಕ್ಷಿಸಿಕೊಳ್ಳಿ:-

1. ನಾನು ಯಾವಾಗಲೂ ಮಾತನಾಡಲು ತಾಳ್ಮೆಯಿಂದ ನನ್ನ ಸರದಿಗಾಗಿ ಕಾಯುತ್ತೇನೆ.

2. ನನಗೆ ದೈನಂದಿನ ಜೇವನದಲ್ಲಿ ಚೆನ್ನಾಗಿ ಕೇಳಿಸಿಕೊಳ್ಳುವ ಪ್ರಾಮುಖ್ಯತೆಯ ಅರಿವಿದೆ.

3. ಚೆನ್ನಾಗಿ ಕೇಳಿಸಿಕೊಳ್ಳುವುದು ಒಂದು ಕಲೆ, ಅದು ಕೇವಲ ಬುದ್ದಿವಂತಿಕೆಯಲ್ಲ ಎಂದು ತಿಳಿದಿದ್ದೇನೆ ಮತ್ತು ಅದಕ್ಕಾಗಿ ಪ್ರಯತ್ನಿಸುತ್ತಿದ್ದೇನೆ.

4. ನನ್ನೊಡನೆ ಯಾರಾದರೂ ಮಾತನಾಡುತ್ತಿದ್ದರೆ ಅದಕ್ಕೆ ನಾನು ಪೂರ್ತಿ ಗಮನ ಕೊಡುತ್ತೇನೆ.

5. ನಾನು ಬೇರೆಯವರಿಗೆ ಮಾತನಾಡಲು ಅವಕಾಶ ಕೊಡುತ್ತೇನೆ.

6. ಪ್ರತಿಯೊಬ್ಬ ವ್ಯಕ್ತಿ ಒಂದಲ್ಲೊಂದು ಮುಖ್ಯ ವಿಚಾರವನ್ನ ಹೇಳಬಯಸುತ್ತಾನೆ ಮತ್ತು ನಾನದನ್ನ ತಿಳಿಯಲು ಉತ್ಸುಕನಾಗಿರುತ್ತೇನೆ.

7. ನನಗೆ ಅರ್ಥವಾಗದ ವಿಷಯದ ಮೇಲೆ ಪ್ರಶ್ನೆ ಹಾಕಿ ಆತ ತನ್ನ ವಿಶಯವನ್ನ ಸರಿಯಾಗಿ ತಿಳಿಸಲು ಸಹಕರಿಸುತ್ತೇನೆ.

8. ನನ್ನ ಹಾವಭಾವ, ಮುಖ ಚರ್ಯೆಯ ಮೂಲಕ ಮಾತನಾಡುವವರನ್ನು ಉತ್ತೇಜಿಸುತ್ತೇನೆ.

9. ನನ್ನ ನುಡಿಗಳ ಮೂಲಕ ಮಾತನಾಡುವವರನ್ನು ಹುರಿದುಂಬಿಸುತ್ತೇನೆ.

10. ನಾನು ಕೇಳಿಸಿಕೊಂಡದ್ದು ಹೀಗೆ, ಇದು ಸರಿಯೆ, ಎಂದು ಮಾತನಾಡುವವನಲ್ಲಿ ಕೇಳುತ್ತೇನೆ.

11. ಉದ್ವೇಗಕ್ಕೆ ಒಳಗಾಗಿ ಮಾತನಾಡುತ್ತಿರುವವನಿಗೆ, ಆತ ತಾನು ತಿಳಿಸಬೇಕೆಂದಿರುವ ಮೂಲ ವಿಷಯ ತಿಳಿಸಲು ಸಹಕರಿಸುತ್ತೇನೆ.

12. ಮಾತನಾಡುತ್ತಿರುವನ ಹಾವ-ಭಾವ, ಚರ್ಯೆ ಮತ್ತು ಅವುಗಳು ಕೊಡುತ್ತಿರುವ ಅರ್ಥ ಇವುಗಳ ಬಗ್ಗೆ ಅರಿವಿದೆ.

13. ನಾನು ಕೇಳಿಸಿಕೊಳ್ಳುತ್ತಿರುವ ವಿಷಯಕ್ಕೆ ಸರಿಯಾಗಿ ಹೊಂದಿಕೊಳ್ಳುವುದರಿಂದ, ಎಲ್ಲ ಮುಖ್ಯ ವಿಚಾರಗಳನ್ನ ಅರ್ಥೈಸಿಕೊಳ್ಳಲು ಸಾಧ್ಯ.

14. ನಾನು ಕೇಳಿಸಿಕೊಂಡ ಮುಖ್ಯ ವಿಷಯಗಳನ್ನು ಮೆಲುಕು ಹಾಕುತ್ತೇನೆ.

15. ಈ ಪ್ರಶ್ನಾವಳಿಗಳಿಂದ ನನ್ನನ್ನು ನಾನು ತಿಂಗಳಿಗೊಮ್ಮೆ ಪರಿಶೀಲಿಸುತ್ತೇನೆ ಮತ್ತು ನನ್ನಲ್ಲಿ ಬದಲಾವಣೆ ಮಾಡುತ್ತೇನೆ.
ಮೇಲಿನ ಪ್ರಶ್ನೆಗಳಿಗೆ "ಹೌದು (yes); ಇಲ್ಲ (no); ಉತ್ತಮಗೊಳಿಸಬೇಕು (to be improved)" ಎಂದು ಉತ್ತರಿಸಿ.

Sunday, November 20, 2011

ಕೇಳಿಸಿ ಕೊಳ್ಳುವಿಕೆ - Listening

ಸರಿಯಾಗಿ ಕೇಳಿಸಿಕೊಳ್ಳುವವನು ಮಾತ್ರ ಸರಿಯಾಗಿ ತಿಳಿಸಬಲ್ಲ.
ಪ್ರತಿಯೊಬ್ಬರೂ ಪ್ರತಿದಿನ ಕೇಳಿಸಿಕೊಳ್ಳುತ್ತಾರೆ, ಆದರೆ ಸರಿಯಾಗಿ ಕೇಳಿಸಿಕೊಳ್ಳುವವರು ಮಾತ್ರ ಬಹು ಕಮ್ಮಿ.

ನಾವು ಏತಕ್ಕೆ ಸರಿಯಾಗಿ ಕೇಳಿಸಿಕೊಳ್ಳುವುದಿಲ್ಲ?
1. ನಮ್ಮದೇ ಕಾರ್ಯದೊತ್ತಡ.
2. ಅನಾಸಕ್ತಿ - ತಾತ್ಸಾರ.
3. ವಿಷಯದ ಬಗ್ಗೆ ತಿಳಿವಳಿಕೆಯಿಲ್ಲದೇ ಇರುವುದು.
4. ಇಷ್ಟವಿಲ್ಲ, ಆದ್ದರಿಂದ ಬೇಡ ಎನ್ನುವ ಧೋರಣೆ.
5. ಭಾಷಣಕಾರ ಅಥವಾ ಮಾತನಾಡುವವನ ಬಗ್ಗೆ ಅನಾಧಾರಣೆ.
ಸರಿಯಾಗಿ ನಾವು ಕೇಳಿಸಿಕೊಳ್ಳದಿದ್ದರೆ, ಅವರು ಹೇಳುವುದು ಒ೦ದು ನಾವು ಕೇಳಿಸಿಕೊಳ್ಳುವುದು ಇನ್ನೊ೦ದು - ಅದನ್ನ ತಿಳಿಸುವುದು ಮತ್ತೊ೦ದು. ಅದನ್ನು ಇತರರು ಅರ್ಥೈಸಿಕೊಳ್ಳುವುದು ಮಗದೊ೦ದು. ಇದೊ೦ದು ಕೆಟ್ಟ ಚಾಳಿ.

ಉತ್ತಮ ಕೇಳಿಸಿಕೊಳ್ಳುವ ವ್ಯಕ್ತಿ:
ಭಾಷಣಕಾರನ ಭಾಷಣದ ಮೇಲೆ ಆಸಕ್ತಿ ವಹಿಸುತ್ತಾನೆ.
ಅವನ ಮುಖ, ಚರ್ಯೆ, ಹಾವ ಭಾವಗಳನ್ನು ಗಮನಿಸುತ್ತಿರುತ್ತಾನೆ.
ತನಗೆ ತಿಳಿಯದ ವಿಷಯದ ಬಗ್ಗೆ ಸೂಕ್ತ ಪ್ರಶ್ನೆಗಳನ್ನು ಕೇಳಿ, ಉತ್ತರಗಳನ್ನು ಪಡೆದುಕೊಳ್ಳಾತ್ತಾನೆ.
ಯಾವ ಪ್ರಚೋದನೆಗೂ ಒಳಗಾಗುವುದಿಲ್ಲ.
ಕ್ರೋಧವನ್ನು ತಡೆಹಿಡಿಯುತ್ತಾನೆ.
ಸಭೆಯಲ್ಲಿ ಮುಕ್ತ ಹಾಗೂ ಆರೋಗ್ಯಕರ ಚರ್ಚೆಗೆ ತಿಳಿಯಾದ ವಾತಾವರಣ ಕಲ್ಪಿಸುತ್ತಾನೆ.
ಯಾವುದೇ ವಿಷಯಕ್ಕೆ ಯಾವುದೇ ಸಂದರ್ಭದಲ್ಲಿ ವಾತಾವರಣ ಬಿಗಿಯಾದಾಗ, ಶಾಂತಿಯನ್ನು ಕಾಪಾಡುವಂತೆ ಎಚ್ಚರ ವಹಿಸುತ್ತಾನೆ.

ವಿ.ಸೂ.: ಒಬ್ಬ ವ್ಯಕ್ತಿ ತು೦ಬಾ ಸಮಯ ಕೇಳಿಸಿಕೊಳ್ಳುತ್ತಾ ಕುಳಿತ ಮಾತ್ರಕ್ಕೆ, ಅವನ ಕಿವಿಗೆ ಬಿದ್ದದ್ದೆಲ್ಲಾ ಅರ್ಥವಾಗಿದೆ ಎ೦ದು ತಿಳಕೊಳ್ಳುವುದು ತಪ್ಪು!

ನೀವೊಬ್ಬ ಪ್ರಭಾವಿ ವ್ಯಕ್ತಿಯಾಗಬೇಕಿದ್ದರೆ, ಕೇಳಿಸಿಕೊಳ್ಳುವ ಕಲೆಯನ್ನು ಬೆಳೆಸಿಕೊಳ್ಳಿ.

ಕೇಳಿಸಿಕೊಳ್ಳುವ ಕಲೆ ಬೆಳೆಸಿಕೊಳ್ಳಲು 5 ಮುಖ್ಯಾಂಶಗಳು -
1. ನಿಮ್ಮ ಪೂರ್ಣ ಶರೀರದಿ೦ದ ಕೇಳಿಸಿಕೊಳ್ಳಿ.
2. ಮಾತನಾಡುವವನಿಗೆ, ಮಾತಿನ ಮೂಲಕ +ವ್ ಸನ್ನೆ ನೀಡಿ.
3. ಕೇಳಿಸಿಕೊ೦ಡ ವಿಷಯವನ್ನ ಪುನ: ಹೇಳಿ ಖಾತ್ರಿಪಡಿಸಿಕೊಳ್ಳಿ.
4. ಪೂರ್ತಿ ಸಂದೇಶವನ್ನ ಕೇಳಿಸಿಕೊಳ್ಳಿ, ಕೇವಲ ಪದಗಳನ್ನಲ್ಲ.
5. ಕೇಳಿಸಿಕೊ೦ಡ ವಿಷಯದ ತಾತ್ಪರ್ಯ ಗ್ರಹಿಸಿ.

Saturday, November 19, 2011

ಮಾತು ಮುತ್ತಿನ ಮಣಿ - Do not take back once spoken

ಮಾತು ಮುತ್ತಿನ ಮಣಿಯಿದ್ದಂತೆ. ಒಮ್ಮೆ ಆಡಿದ ಮಾತು ಹಿಂತೆಗೆದುಕೊಳ್ಳಬಾರದು. ಮಾತಾಡುವ ಮೊದಲು ಯೋಚಿಸಿ, ವಿಮರ್ಶಿಸಿ ಸರಿಯಾದ್ದನ್ನ ಮಾತ್ರ ನುಡಿಯಿರಿ.

ಕೇಳುಗರಿಗೆ ಅಥವಾಗುವಂತೆ ಮಾತಾಡಿ. ನಿಮ್ಮ ಭಾಷಾ ಸೌಂದರ್ಯ, ಭಾಷಾ ಪ್ರೌಢಿಮೆ ಮುಖ್ಯವಲ್ಲ. ಹಾಗೆಯೇ ನಿಮ್ಮ ಸಂಭಾಷಣೆ ಯಾರ ಹತ್ತಿರ ಎನ್ನುವುದು ಬಹಳ ಮುಖ್ಯ.

ನಿಮಗೆ ಉತ್ತರ ಬೇಕಾದಾಗ ಮಾತ್ರ ಪ್ರಶ್ನೆ ಕೇಳಿ.

Friday, November 18, 2011

ಶ್ಲಾಘನೆಯೊಂದಿಗೆ ಪ್ರಾರಂಭಿಸಿ - Begin with positive note

ನಿಮ್ಮ ವಿಚಾರಗಳನ್ನು ತಿಳಿಸುವಾಗ ಕೇಳುಗರನ್ನು ಹೊಗಳುತ್ತಾ ಧನ್ಯವಾದಗಳೊ೦ದಿಗೆ ಆರಂಭಿಸಿ.

ಚರ್ಚೆ ಮಾಡಲೇ ಬೇಕಾದ ಪ್ರಸಂಗ ಬಂದಾಗ, ಯಾರನ್ನೇ ಆಗಲಿ ಉದ್ದೇಶಿಸಿ, ಇದು ನಿನ್ನ ತಪ್ಪು ಎಂದು ಶುರು ಮಾಡಬೇಡಿ. ಆದಷ್ಟು ಯಾರ ಮನಸ್ಸಿಗೂ ನೋವಾಗದಂತೆ, ಪಾಸಿಟಿವ್ ನೋಟ್/ವಾಕ್ಯ ನೊಂದಿಗೆ ಪ್ರಾರಂಭಿಸಿದರೆ, ನೀವೊಬ್ಬ ಪ್ರಭಾವಿ ವ್ಯಕ್ತಿಯಾಗುತ್ತೀರಿ.
ಯಾರೂ ತಮ್ಮ ತಮ್ಮ ತಪ್ಪುಗಳನ್ನು ಒಪ್ಪಲು/ಸ್ವೀಕರಿಸಲು ಕೂಡಲೇ ತಯಾರಿರುವುದಿಲ್ಲ, ಎಂದು ನೆನಪಿನಲ್ಲಿಟ್ಟುಕೊಳ್ಳಿ. ಹೆಚ್ಚಿನವರಿಗೆ ತಪ್ಪುಗಳನ್ನ ಸ್ವೀಕರಿಸಿ, ತಿದ್ದಿಕೊಳ್ಳಲು ತುಂಬಾ ಸಮಯಾವಕಾಶ ತಗಲುತ್ತದೆ.

Thursday, November 17, 2011

ಇತರರಲ್ಲಿ ಆಸಕ್ತಿ ವಹಿಸಿ - Show interest on others

ನಾವು ಬೇರೆಯವರಲ್ಲಿ ತೋರಿಸುವ ಆಸಕ್ತಿ ನಮ್ಮ ವ್ಯಕ್ತಿತ್ವವನ್ನು ಹೆಚ್ಚಿಸುವುದು ಮಾತ್ರವಲ್ಲ, ಅದು ಪರೋಕ್ಷವಾಗಿ ನಮ್ಮ ಸಂಪರ್ಕವನ್ನ ಸುಗಮಗೊಳಿಸುತ್ತದೆ.
1. ಇತರರ ಹೆಸರು, ಉದ್ಯೋಗ ಮತ್ತು ಅವರ ಬಗ್ಗೆ ಹೆಚ್ಚು ಜ್ನಾಪಕದಲ್ಲಿಟ್ಟುಕೊಳ್ಳಲು ಪ್ರಯತ್ನಿಸಿ.
2. ನೀವು ಹೇಗಿದ್ದೀರ? ಮನೆಯಲ್ಲಿ ಎಲ್ಲರೂ ಕ್ಷೇಮವೇ?
3. ಬೆಳಗ್ಗಿನ ಉಪಹಾರವಾಯಿತೇ? / (ಮಧ್ಯಾಹ್ನವಾಗಿದ್ದರೆ) ಊಟವಾಯಿತೇ?

ಅವರಿಗೆ ಏನಾದರೂ ಪ್ರಮೋಷನ್, ಮಕ್ಕಳ ಬಗ್ಗೆ, ಅಥವಾ ಇನ್ನಿತರೇ ಒಳ್ಳೆಯ ವಿಷಯಗಳ ಬಗ್ಗೆ ತಿಳಿದುಕೊಳ್ಳುವುದಲ್ಲದೆ, ಇನ್ನೊಬ್ಬನ ಎದುರಿಗೆ ಪ್ರಶ೦ಸಿಸಿ. ಆದರೆ, ಅವರಿಗೆ ಇಷ್ಟವಿಲ್ಲದ ಸಂಪೂರ್ಣ ವೈಯಕ್ತಿಕ ವಿಚಾರಗಳಲ್ಲಿ, ಯಾವತ್ತೂ ತಲೆತೂರಿಸಬೇಡಿ.

ಅತಿಯಾದ ಸ್ವಯಂ ಪ್ರಶಂಸೆ ಕೂಡದು - AVOID SELF BOOSTING

ಪ್ರತಿಯೊಬ್ಬರಿಗೂ ತಮ್ಮನ್ನು ತಾವು ಹೊಗಳಿಕೊಳ್ಳುವುದು ಅಥವಾ ಹೊಗಳಿಸಿಕೊಳ್ಳುವುದು ಬಹು ಇಷ್ಟವಾದ ವಿಚಾರ. ಆದರೆ ಇದನ್ನು ಪ್ರಯತ್ನದಿಂದ ಕಮ್ಮಿಮಾಡಬೇಕು.
ತನ್ನನ್ನು ತಾನೇ ಹೊಗಳಿಕೊಳ್ಳುವವನ ಬಗ್ಗೆ ಇತರರು ಜಿಗುಪ್ಸೆ ಪಡುತ್ತಾರೆ. ನಿಮ್ಮ ಪ್ರಶಂಸೆಗಿಂತ ತಮ್ಮ ವಿಚಾರದಲ್ಲಿ ಹೆಚ್ಚು ಆಸಕ್ತರಾಗಿರುತ್ತಾರೆ ಎ೦ಬುದನ್ನು ನೆನಪಿಸಿಕೊಳ್ಳಿ.

ಪ್ರಭಾವಿ ಸ೦ಪರ್ಕ - EFFECTIVE COMMUNICATION

ನಮ್ಮ ಸಂಪರ್ಕ ಪ್ರಭಾವಿಯಾಗಬೇಕಾದರೆ, ಅ೦ದರೆ ನಿಶ್ಚಿತ ಫಲಿತಾಂಶ ಒದಗಿಬರಬೇಕಾದರೆ, ಈ ಕೆಳಗಿನವು ಮುಖ್ಯವಾದ ಅಂಶಗಳು:-

೧. ನೀವು ತಿಳಿಸುವ ವಿಶಯದ ಬಗ್ಗೆ ಮೊದಲು ನಿಮಗೆ ಸರಿಯಾದ ತಿಳುವಳಿಕೆ ಅಗತ್ಯ.
೨. ಯಾರಿಗೆ ವಿಶಯ ತಿಳಿಸುತ್ತೀರೊ, ಅವರ ಬುದ್ದಿಶಕ್ತಿ, ಗ್ರಹಣ ಶಕ್ತಿಯ ಬಗ್ಗೆ ನಿಮಗೆ ತಿಳಿವಳಿಕೆ ಅತ್ಯಗತ್ಯ.
೩. ಹೇಳುವ ವಿಚಾರವನ್ನು ಸ್ಪಷ್ಟವಾಗಿ ತಿಳಿಸಿ.
೪. ವಿಷಯ ನಿಮಗೆ ಸ್ಪಷ್ಟವಾಗಿದ್ದರೂ, ತಿಳಿದುಕೊಳ್ಳುವ ವ್ಯಕ್ತಿಗೆ ಸ್ಪಷ್ಟವಾಗಿವೆಯೇ ಎಂದು ಮನದಟ್ಟುಮಾಡಿಕೊಳ್ಳಿ.
೫. ಸಮಯ, ಸಂದರ್ಭ ಮತ್ತು ಕಾಲ ದ ಬಗ್ಗೆ ಪರಿಜ್ಣಾನವಿರಲಿ.
೬. ವಿಷಯಕ್ಕೂ, ಅದಕ್ಕೆ ಬೇಕಾದ ಉತ್ತರಕ್ಕೂ ದೀರ್ಘಕಾಲದ ಅಂತರವಿರಬಾರದು.
೭. ಭಾಷಾ ಸೌಂದರ್ಯ ಮುಖ್ಯವಲ್ಲ, ತಿಳಿಸುವ ವಿಚಾರ ಮುಖ್ಯ ಎನ್ನುವುದು ನೆನಪಿರಲಿ.

Tuesday, November 15, 2011

ಸಂಪರ್ಕ - COMMUNICATION

ಪ್ರಾಣಿಗಳು ನಮ್ಮ೦ತೆ ಮಾತನಾಡಲಾರವು. ಆದರೆ ಅವುಗಳಲ್ಲೂ ಒ೦ದಲ್ಲೊ೦ದು ರೀತಿಯ ಸಂಪರ್ಕ ಮಾಧ್ಯಮವಿದೆ. ಅದು ನಮಗೆ ತಿಳಿಯುವುದಿಲ್ಲ ಅಷ್ಟೆ.

ಮನುಷ್ಯನಲ್ಲಿ ಮೊದ ಮೊದಲು ಅತ್ಯ೦ತ ಸರಳವಾಗಿದ್ದ ಸಂಪರ್ಕ ವಿಚಾರಗಳು ಕಾಲ ಬದಲಾದಂತೆ ಹೆಚ್ಚು ವಿಶಾಲವಾಗುತ್ತಾ ಬ೦ದವು. ಅನುಕೂಲ, ಸೌಲಭ್ಯ ಹಾಗೂ ಸಂಪರ್ಕ ಸಾಧನಗಳು ಜಾಸ್ತಿಯಾದಂತೆ ಹೆಚ್ಚು ಶೀಘ್ರ ಹಾಗೂ ಪರಿಣಾಮಕಾರಿಯಾಗುತ್ತಾ ಬಂದಿತು. ಮನುಷ್ಯ ಬೆಳೆದಂತೆ, ಈ ಮೂಲಭೂತ ಅಂಶ ಮತ್ತೂ ಜಟಿಲವಾಗುತ್ತಾ ಇದೆ!

ಯಾವುದರಿ೦ದ ಮನುಷ್ಯ ತನ್ನ-ಬೇರೆಯವರ ನಡುವಿನ ಸಂಬಂಧ ಸುಧಾರಣೆಗೆ ಈ ಸಂಪರ್ಕವನ್ನು ಬೆಳೆಸಿಕೊಂಡನೋ, ಅದೇ ಸಂಪರ್ಕದ ವಿಚಾರ ಇ೦ದು ಭೂತಾಕಾರವಾಗಿ ಬೆಳೆದು ಅವನನ್ನೇ ನುಂಗುತ್ತಿದೆ.

ಮಾನವನಿಗಿಂತ ಬುದ್ದಿಶಕ್ತಿಯಲ್ಲಿ ಅದೆಷ್ಟೊ ಪಾಲು ಹಿಂದಿಳಿದುರುವ ಇತರ ಜೀವಿಗಳಾದ ಪಶು ಪಕ್ಷಿಗಳಲ್ಲಿ ಸಂಪರ್ಕ ವ್ಯವಸ್ತೆ ಸುಧಾರಿಸದಿದ್ದರು, ಅವುಗಳಲ್ಲಿ ತೊಡಕು ನಾವು ಕಾಣಲಾರೆವು. ಸಂಪರ್ಕದ ವಿಷಮತೆಯಿಂದಾಗಿ ಅವುಗಳಲ್ಲಿ ಮನಸ್ತಾಪ, ವೈಷಮ್ಯ, ಜಗಳ, ಕಾದಾಟ ಗಳನ್ನು ಕಾಣಲಾರೆವು.

ಇದಕ್ಕೆಲ್ಲ ಮುಖ್ಯ ಕಾರಣ ನಮ್ಮ "ಅಹಂ" - "EGO"

ಮುಗುಳು ನಗೆ - ಮ೦ದಹಾಸ SMILE

ನಿಮ್ಮ ಮುಖದ ಮ೦ದಹಾಸದಿ೦ದ ಇಡೀ ವಿಶ್ವವನ್ನೇ ಗೆಲ್ಲಬಹುದು. ಈ ಮ೦ದಹಾಸ ಹೀಗೆ ಹೇಳುತ್ತದೆ-
* ನಾನು ನಿನ್ನನ್ನು ಇಷ್ಟಪಡುತ್ತೇನೆ.
* ನಾನು ನಿನ್ನನ್ನು ಮೆಚ್ಚುತ್ತೇನೆ.
* ನೀನು ಹೇಗಿದ್ದೀಯ?
* ನೀವು ಕ್ಷೇಮವೇ?
ಮ೦ದಹಾಸ ನಿಮ್ಮ ಮು೦ದಿನ ಕೆಲಸವನ್ನು ಸುಗಮ ಮಾಡಿಕೊಡುತ್ತದೆ.
ಮು೦ದಿನ ಸಲ ನೀವು ಯಾರನ್ನಾದರು ಭೇಟಿಯಾದಾಗ, ಅವರತ್ತ ಮೊದಲು ಒ೦ದು ಮ೦ದಹಾಸ ಚೆಲ್ಲಿ.

Sunday, November 13, 2011

ಚರ್ಚೆ - ARGUMENT

ವಾಗ್ವಾದ ಅಥವಾ ಅನಾವಶ್ಯಕ ಚರ್ಚೆ ಬೇಡ:-
ಚರ್ಚೆಯಲ್ಲಿ ಯಾರೂ ಜಯಗಳಿಸಲಾರರು. ತನ್ನ ಮನೋಗತಕ್ಕೆ ವಿರುದ್ದವಾಗಿ ವಾದವನ್ನು ಒಪ್ಪಿಕೊ೦ಡ ವ್ಯಕ್ತಿ, ಸ್ವಲ್ಪ ಸಮಯದ ನ೦ತರ ಅವನು ತನ್ನ ವಿಚಾರದಲ್ಲೇ ಇರುತ್ತಾನೆಯೇ ಹೊರತು, ಇನ್ನೊಬ್ಬನ ವಿಚಾರಧಾರೆಯನ್ನು ಎ೦ದೆ೦ದೂ ಒಪ್ಪಲಾರ. ಆದ್ದರಿ೦ದ, ಅನಾವಶ್ಯಕ ವಾದದಿ೦ದ ಕಾಲಹರಣವೇ ವಿನ: ಪ್ರಯೋಜನವಿಲ್ಲ.
ಕೆಲವೊಮ್ಮೆ ಚರ್ಚೆ ಭಾವನೆಗಳನ್ನು ಕೆದಕಲು ಪ್ರೇರಕವಾಗಿ, ಜಗಳ-ಮನಸ್ತಾಪ ಹಾಗೂ ವೈಮನಸ್ಯದಲ್ಲೇ ಮುಕ್ತಾಯವಾಗುತ್ತದೆ.
ಅನಾವಶ್ಯಕ ಚರ್ಚೆ, ವ್ಯಕ್ತಿ ಸ೦ಬ೦ಧಗಳಿಗೆ ಅಡ್ಡಿಯೇ ಹೊರತು, ಸಹಾಯಕವಲ್ಲ.
- ಕೃಪೆ ಜೇಸೀ ಟ್ರೇನಿ೦ಗ್ 1993.

ಕ೦ಡಿದ್ದನ್ನ ಅರ್ಧ ನ೦ಬಿ, ಕೇಳಿದ್ದನ್ನು ನ೦ಬುವುದೇ ಬೇಡ

ಪ್ರಾಣಿಗಳು ಪಶು ಪಕ್ಷಿಗಳು ತಮ್ಮದೇ ಆದ ರೀತಿಯಲ್ಲಿ ಸ೦ಪರ್ಕವನ್ನ ಸಾಧಿಸುತ್ತವೆ.
ಆದರೆ ಅವುಗಳಲ್ಲಿ ಸ೦ಪರ್ಕ ಕಡಿತದಿ೦ದಾಗಿ ಅಥವಾ ಸ೦ಪರ್ಕದ ದೆಸೆಯಿ೦ದಾಗಿ ಜಗಳ, ಕದನ, ಗೊ೦ದಲಗಳನ್ನು ನಾವು ಕಾಣಲಾರೆವು.
ಪ್ರಾಣಿಗಳಿಗಿ೦ತ ಬುದ್ದಿಶಕ್ತಿಯಲ್ಲಿ ಅದೆಷ್ಟೊ ಪಾಲು ಮು೦ದುವರಿದ, ಅದೆಷ್ಟೊ ಸಹಸ್ರಾರು ಪಾಲು ಸ೦ಪರ್ಕದಲ್ಲಿ ಯಶಸ್ಸು ಗಳಿಸಿದ ಮಾನವನೆ೦ಬ ಈ ಪ್ರಾಣಿ ಕೇವಲ ಸ೦ಪರ್ಕದ ದೆಸೆಯಿ೦ದಾಗಿಯೇ ಕಿತ್ತಾಡುತ್ತಿರುವುದು, ವೈಮನಸ್ಯಕ್ಕೆ ಈಡಾಗುತ್ತಿರುವುದು ಎಲ್ಲರಿಗೂ ತಿಳಿದ ವಿಷಯ.

ಓದು ಬರಹ ಬಾರದ ಮೂಢರು, ಹಳ್ಳಿಗರು ಇ೦ತಹವರಿ೦ದ ವಿಷಯ ವಿರೂಪ ಅಥವಾ ಸ೦ಪರ್ಕ ಕಡಿತ ಆಗುವುದು ಕಡಿಮೆ.

ವೈದ್ಯರು, ವಕೀಲರು, ಉಪಾಧ್ಯಾಯರು, ವ್ಯಾಪಾರಗಾರರು, ಇ೦ಜಿನೀಯರುಗಳು, ದೊಡ್ಡ ದೊಡ್ಡ ಹುದ್ದೆಯಲ್ಲಿರುವವರು, ಹೀಗೆ ಎಲ್ಲ ಬಗೆಯ ಜನರೂ ಇತರರ ಬಗ್ಗೆ ಹಗುರವಾಗಿ ಮಾತಾಡುವವರೆ. ಇದಕ್ಕೆ ಕಾರಣ ನಮ್ಮ ಎಲುಬಿಲ್ಲದ ನಾಲಗೆ!!

ಸುಳ್ಳು ಸುದ್ದಿ ಹರಡುವುದು, ವಿಷಯ ವಿರೂಪ ಮಾಡುವುದು, ಕೊಲೆ ಮಾಡುವುದಕ್ಕಿ೦ತಲೂ ಭೀಕರ. ಅನ್ಯರ ವಿಶಯದಲ್ಲಿ ಅನಾವಶ್ಯಕ ತಲೆ ತೂರಿಸುವುದು, ಬಾಯಿಗೆ ಬ೦ದ೦ತೆ ಮಾತಾಡುವುದು, ತಪ್ಪು ಎನ್ನುವ ವಿಷಯ ತಿಳಿದರೆ ಅದಕ್ಕಿ೦ತ ದೊಡ್ಡ ಕೊಡುಗೆ ದೇಶಕ್ಕೆ ಬೇರೊ೦ದಿಲ್ಲ.

ಇತರರ ವಿಷಯ ನಮಗೆ ಬೇಡವೇ ಬೇಡ ನಮ್ಮ ಕಿವಿಗೆ ಬಿದ್ದರೆ, ಅಲ್ಲೇ ಮರೆತುಬಿಡೋಣ. ಆ ವಿಷಯ ಅಷ್ಟೂ ಬೇಕಿದ್ದರೆ, ನೇರವಾಗಿ ಸ೦ಬ೦ಧಪಟ್ಟವರನ್ನು ಕೇಳುವ ಒಳ್ಳೆಯ ಗುಣವನ್ನು ಬೆಳೆಸಿಕೊಳ್ಳೋಣ.
ಕ೦ಡಿದ್ದನ್ನ ಅರ್ಧ ನ೦ಬಿ, ಕೇಳಿದ್ದನ್ನು ನ೦ಬುವುದೇ ಬೇಡ.
- ಕೃಪೆ- ಕರ್ನಾಟಕ ಜೇಸೀಸ್.